Friday 25 July 2014

ಮೊಬೈಲ್ ಮೆಸೇಜಿಂಗ್ ಸರ್ವೀಸ್ ವಾಟ್ಸ್‌ಆಪ್ ಅನ್ನು ಖರೀದಿಸಿದ ಫೇಸ್‌ಬುಕ್

ಮೊಬೈಲ್ ಮೆಸೇಜಿಂಗ್ ಸರ್ವೀಸ್ ವಾಟ್ಸ್‌ಆಪ್ ಅನ್ನು ಖರೀದಿಸಿದ 

ಫೇಸ್‌ಬುಕ್

ಮೊಬೈಲ್ ತಂತ್ರಜ್ಞಾನದ ಇತಿಹಾಸದಲ್ಲೇ ಅತಿದೊಡ್ಡ ಡೀಲ್ ನಡೆದಿದೆ. ಜನಪ್ರಿಯ ಮೊಬೈಲ್ ಮೆಸೇಜಿಂಗ್ ಸರ್ವೀಸ್ 

ಆಗಿರುವ ವಾಟ್ಸ್‌ಆಪ್ ಅನ್ನು ಬರೋಬ್ಬರಿ 12 ಲಕ್ಷ ಸಾವಿರ ಕೋಟಿಗೆ ಫೇಸ್‌ಬುಕ್ ಖರೀದಿಸಿದೆ.

ಯಾಕೆ ಡೀಲ್?

ಸಾಮಾಜಿಕ ತಾಣಗಳಲ್ಲಿ ಜನಪ್ರಿಯತೆ ಗಳಿಸಿರುವ ಫೇಸ್‌ಬುಕ್‌ಗೆ ಮೊಬೈಲ್ ಸಂವಹನದಲ್ಲೂ ಪಾರುಪತ್ಯ

 ಗಳಿಸಬೇಕೆಂಬ ಧ್ಯೇಯವಿತ್ತು. ಅದರ ಪರಿಣಾಮವೇ ಫೇಸ್‌ಬುಕ್-ವಾಟ್ಸ್‌ಆಪ್ ಡೀಲ್. ಈ ಬೃಹತ್ ಒಪ್ಪಂದದ 

ಮೂಲಕ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ಮೊಬೈಲ್ ಸಂವಹನ ಲೋಕಕ್ಕೆ ಕಾಲಿಟ್ಟಿದ್ದಾರೆ. 

ವಿಶೇಷವಾಗಿ ಯುವಜನರ ಮನಸ್ಸಿನಲ್ಲಿ ಸ್ಥಾನ ಪಡೆಯುವುದು ಹಾಗೂ ತನ್ನ ಜನಪ್ರಿಯತೆಯನ್ನು ಇನ್ನಷ್ಟು 

ಹೆಚ್ಚಿಸುವುದು ಇದರ ಹಿಂದಿನ ಮುಖ್ಯ ಉದ್ದೇಶವಾಗಿದೆ.

ಒಪ್ಪಂದದಲ್ಲೇನಿದೆ?

ಒಟ್ಟು 19 ಶತಕೋಟಿ ಡಾಲರ್‌ಗೆ ವಾಟ್ಸ್‌ಆಪ್ ಅನ್ನು ಫೇಸ್‌ಬುಕ್ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದೆ.

ಒಪ್ಪಂದದ ಪ್ರಕಾರ, ಫೇಸ್‌ಬುಕ್ ಮೊದಲು 4 ಶತಕೋಟಿ ಡಾಲರ್ ಅನ್ನು ನಗದು ರೂಪದಲ್ಲಿ ನೀಡಲಿದೆ. 

ನಂತರ ಫೇಸ್‌ಬುಕ್‌ನ ಷೇರುಗಳ ರೂಪದಲ್ಲಿ 12 ಶತಕೋಟಿ ಡಾಲರ್ ನೀಡಲಿದೆ. ಅಷ್ಟೇ ಅಲ್ಲದೆ, ವಾಟ್ಸ್‌ಆಪ್ 

ಸ್ಥಾಪಕರು ಮತ್ತು ನೌಕರರಿಗೆ 3 ಶತಕೋಟಿ ಡಾಲರ್ ಮೊತ್ತದ ನಿಯಂತ್ರಿತ ಷೇರುಗಳನ್ನು ಫೇಸ್‌ಬುಕ್ ಒದಗಿಸಲಿದೆ. 

ಒಪ್ಪಂದದಂತೆ, ವಾಟ್ಸ್‌ಆಪ್ ಸ್ಥಾಪಕ ಜಾನ್ ಕೌಮ್ ಫೇಸ್‌ಬುಕ್‌ನ ನಿರ್ದೇಶಕರ ಮಂಡಳಿಯಲ್ಲಿ ಸ್ಥಾನ ಪಡೆಯಲಿದ್ದಾರೆ.

ದೊಡ್ಡ ಡೀಲ್?

ವಾಟ್ಸ್‌ಆಪ್-ಫೇಸ್‌ಬುಕ್ ಡೀಲ್ 19 ಶತಕೋಟಿ ಡಾಲರ್(12 ಲಕ್ಷ ಸಾವಿರ ಕೋಟಿ). 2011ರಲ್ಲಿ 8.5 ಬಿಲಿಯನ್ 

ಡಾಲರ್(528 ಶತಕೋಟಿ ಡಾಲರ್)ಗೆ ಸ್ಕೈಪ್ ಅನ್ನು ಮೈಕ್ರೋಸಾಫ್ಟ್ ಖರೀದಿಸಿತ್ತು. ಮೋಟೊರೋಲಾ ಖರೀದಿ ವೇಳೆ 

ಲೆನೋವೋ 2.9 ಶತಕೋಟಿ ಡಾಲರ್ ಅನ್ನು ಗೂಗಲ್‌ಗೆ ನೀಡಿತ್ತು. ಇತ್ತೀಚೆಗಷ್ಟೇ ಫೇಸ್‌ಬುಕ್ 1 ಶತಕೋಟಿ ಡಾಲರ್‌ಗೆ

 ಇನ್‌ಸ್ಟಾಗ್ರಾಂ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ಹಾಗಾಗಿ ಮೊಬೈಲ್ ಟೆಕ್ ವಲಯದ ಇತಿಹಾಸದಲ್ಲೇ ಅತ್ಯಂತ ಹೆಚ್ಚಿನ

 ಮೊತ್ತಕ್ಕೆ ನಡೆದ ಒಪ್ಪಂದವೆಂದರೆ ವಾಟ್ಸ್‌ಆಪ್-ಫೇಸ್‌ಬುಕ್ ಡೀಲ್.

ವಾಟ್ಸ್‌ಆಪ್‌ ಇತಿಹಾಸ:

ವಾಟ್ಸ್‌ಆಪ್‌ನ ಸ್ಥಾಪಕ ಹಾಗೂ ಸಿಇಓ ಜಾನ್ ಕೌಮ್(37) ಮೂಲತಃ ಉಕ್ರೇನ್‌ನವರು. ಕಡು ಬಡ ಕುಟುಂಬವರಾಗಿದ್ದ

ಕೌಮ್ ಕುಟುಂಬ ಕ್ಯಾಲಿಫೋರ್ನಿಯಾಗೆ ವಲಸೆ ಬಂದಿತ್ತು. ಆಗ ಕೌಮ್‌ಗೆ 16 ವರ್ಷ. ಸರ್ಕಾರವು ಅತಿ ಬಡವರಿಗೆ ನೀಡುವ

 ಆಹಾರದ ಕೂಪನ್ ಮೂಲಕ ಆಹಾರ ಪಡೆದು ಕೌಮ್ ಕುಟುಂಬ ದಿನದೂಡುತ್ತಿತ್ತು. ಒಂದು ಕಾಲದಲ್ಲಿ ಅಂತಹ ದುರವಸ್ಥೆಯ

 ಬದುಕಿಗೆ ಸಾಕ್ಷಿಯಾಗಿದ್ದ ಕೌಮ್ ಈಗ ಕೋಟ್ಯಧಿಪತಿಯಾಗಿ ಬೆಳೆದಿದ್ದಾರೆ. ಬಿಲ್ ಗೇಟ್ಸ್, ಮಾರ್ಕ್ಝುಕರ್‌ಬರ್ಗ್‌ರಂತೆಯೇ

 ಕೌಮ್ ಕೂಡ ಅರ್ಧದಲ್ಲೇ ಕಾಲೇಜು ಬಿಟ್ಟವರು. ಬಾಗಿಲು ತಟ್ಟಿ ವಾಪಸಾಗಿದ್ದ ವಾಟ್ಸ್‌ಆಯಪ್‌ನ ಸಹಸ್ಥಾಪಕ ಬ್ರಿಯಾನ್

 ಆಯಕ್ಟನ್ 2009ರಲ್ಲಿ ಕೆಲಸಕ್ಕಾಗಿ ಸ್ವತಃ ಫೇಸ್‌ಬುಕ್ ಹಾಗೂ ಟ್ವಿಟರ್ ಕಚೇರಿಯ ಬಾಗಿಲು ತಟ್ಟಿದ್ದ. ಆದರೆ ಕೆಲಸ 

ಗಿಟ್ಟಿಸಿಕೊಳ್ಳುವಲ್ಲಿ ವಿಫಲನಾದ. ನಂತರ ವಾಟ್ಸ್‌ಆಯಪ್‌ನ ಸಹಸ್ಥಾಪಕನ ಹುದ್ದೆ ಬ್ರಿಯಾನ್‌ನ ಬದುಕಿಗ ಗತಿಯನ್ನೇ

 ಬದಲಾಯಿಸಿತು. ಅಂದು ಕೆಲಸೇ ನೀಡದೇ ವಾಪಸ್ ಕಳುಹಿಸಿದ್ದ ಅದೇ ಫೇಸ್‌ಬುಕ್ ಈಗ ಕೌಮ್- ಬ್ರಿಯಾನ್‌ರ 

ಕಂಪನಿಯನ್ನು ಖರೀದಿಸಿದೆ ಎನ್ನುವುದು ವಿಪರ್ಯಾಸ.

ಪರಿಣಾಮವೇನು?

ಈ ಡೀಲ್‌ನಿಂದಾಗಿ ವಾಟ್ಸ್‌ಆಯಪ್ ಬ್ರ್ಯಾಂಡ್ ಮೇಲೆ ಯಾವುದೇ ಪರಿಣಾಮ ಬೀರದು. ಈ ಬ್ರ್ಯಾಂಡ್ ಅನ್ನು ಇದೇ 

ರೀತಿ ಮುಂದುವರಿಸಿಕೊಂಡು ಹೋಗುವುದಾಗಿ ಝುಕರ್‌ಬರ್ಗ್ ಭರವಸೆ ನೀಡಿದ್ದಾರೆ. ಜತೆಗೆ ವಾಟ್ಸ್‌ಆಯಪ್‌ನ ಪ್ರಧಾನ 

ಕಚೇರಿಯೂ ಕ್ಯಾಲಿಫೋರ್ನಿಯಾದ ಮೌಂಟನ್ ವ್ಯೂವ್‌ನಲ್ಲೇ ಇರಲಿದೆ. ಅದು ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. 

ಈಗ ಹೇಗೆ ಸೇವೆ ನೀಡುತ್ತದೆಯೋ ಅದೇ ರೀತಿ ಸೇವೆ ನೀಡಲಿದೆ. ಬಳಕೆದಾರರಿಗೆ ಈಗಿನಂತೆಯೇ ಜಾಹೀರಾತುಗಳ 

ಕಿರಿಕಿರಿಯೂ ಇರುವುದಿಲ್ಲ.

ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿ ಭಾರತೀಯ ಸಂಜಾತ ಮನುಸಾಲೆ ನೇಮಕ

ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿ 

ಭಾರತೀಯ ಸಂಜಾತ ಮನುಸಾಲೆ ನೇಮಕ

ಬೆಂಝ್ ಕಂಪನಿ ಭಾರತದಲ್ಲಿ ಸ್ಥಾಪಿಸಿರುವ ಅಧ್ಯಯನ ಮತ್ತು ಅಭಿವೃದ್ಧಿ ಕೇಂದ್ರಕ್ಕೆ ಆಡಳಿತ ನಿರ್ದೇಶಕ ಹಾಗೂ 

ಕಾರ್ಯನಿರ್ವಾಹಕ ಅಧಿಕಾರಿಯಾಗಿ ಇದೇ ಮೊದಲ ಬಾರಿಗೆ ಭಾರತೀಯರೊಬ್ಬರು, ಅದರಲ್ಲೂ ಕನ್ನಡಿಗರೊಬ್ಬರು 

ನೇಮಕಗೊಂಡಿದ್ದಾರೆ. ಮೂಲತಃ ಪುತ್ತೂರಿನವರೇ ಆದ ಮತ್ತು ಸಂಪೂರ್ಣ ಶಿಕ್ಷಣವನ್ನು ಕರ್ನಾಟಕದಲ್ಲೇ ಪಡೆದ

 ಮನುಸಾಲೆ ಅವರು ಏಪ್ರಿಲ್ 1 ರಿಂದ ಭಾರತದಲ್ಲಿರುವ ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ

 ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದೇ ಮೊದಲು:

ಬೆಂಝ್ ಸಂಸ್ಥೆ ಇತಿಹಾಸದಲ್ಲಿ ಭಾರತೀಯರೊಬ್ಬರು ಇಷ್ಟು ಉನ್ನತ ಹುದ್ದೆಗೆ ಏರುತ್ತಿರುವುದು ಇದೇ ಮೊದಲು. 

ಕನ್ನಡಿಗರೊಬ್ಬರು ಬೆಂಝ್ ಸಂಸ್ಥೆಯಲ್ಲಿ ಇಷ್ಟು ಉನ್ನತ ಹುದ್ದೆಗೇರಿದ ಉದಾಹರಣೆಯೇ ಇಲ್ಲ. 2010ರಿಂದ 

ಭಾರತದಲ್ಲಿರುವ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿದ್ದ ಡಾ. ಜೆನ್ಸ್ ಕಟ್ಟಾರಿಯಸ್ ಅವರು 

ಇದೇ ಸಂದರ್ಭದಲ್ಲಿ ಹೊಸ ಮುಖ್ಯಸ್ಥರಾದ ಮನು ಸಾಲೆ ಅವರಿಗೆ ಬೆಂಝ್ ಕಾರ್ ಕೀ ಹಸ್ತಾಂತರಿಸುವ ಮೂಲಕ 

ವಿದ್ಯುಕ್ತವಾಗಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ.

ಕಿರು ಪರಿಚಯ:

ಮನು ಸಾಲೆ ಅವರು 1973ರ ಮೇ 4ರಂದು ದಕ್ಷಿಣ ಕನ್ನಡ ತಾಲೂಕಿನ ಪುತ್ತೂರಿನಲ್ಲಿ ಜನಿಸಿದರು. 

ಹಾಸನ ಹಾಗೂ ಮೈಸೂರಿನಲ್ಲಿ ಅಧ್ಯಯನ ನಡೆಸಿದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ 

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. 1995ರಲ್ಲಿ ಕ್ಯಾಂಪಸ್ 

ಆಯ್ಕೆ ಪ್ರಕ್ರಿಯೆಯಲ್ಲಿ ಬಾಷ್ ಸಂಸ್ಥೆಗೆ ಆಯ್ಕೆಯಾದರು. ನಂತರ ಬ್ರಾಜಿಲ್, ಜರ್ಮನಿ, ಚೈನಾ, 

ದಕ್ಷಿಣ ಕೊರಿಯಾಗಳಲ್ಲಿ ಬಾಷ್ ಸಂಸ್ಥೆಯಲ್ಲೇ ಕೆಲಸ ಮಾಡಿದ ಅವರು, 2011ರ ಜೂನ್‌ನಲ್ಲಿ ಭಾರತದಲ್ಲಿರುವ 

ಬೆಂಝ್ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದಲ್ಲಿ ಎಲಿಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ 

ಮುಖ್ಯಸ್ಥರಾಗಿ ಸೇರಿದರು. 2012ರಲ್ಲಿ ಉಪ ಆಡಳಿತ ನಿರ್ದೇಶಕರಾಗಿ ನೇಮಕಗೊಂಡಿದ್ದರು. 1996ರಲ್ಲಿ ಬೆಂಝ್ 

ಸಂಸ್ಥೆ ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ್ದು, ಈಗ ಅದರಲ್ಲಿ 1400 ಮಂದಿ ಉದ್ಯೋಗ 

ಪಡೆದಿದ್ದಾರೆ. ಬೆಂಝ್ ಸಂಸ್ಥೆ ಜರ್ಮನಿಯ ಹೊರಗೆ ಹೊಂದಿರುವ ಅತ್ಯಂತ ದೊಡ್ಡ ಮತ್ತು ಆಧುನಿಕ ಸಂಶೋಧನಾ

ಕೇಂದ್ರ ಇದಾಗಿದೆ.

Sunday 6 July 2014

ಬ್ರಿಟೀಷ್ ಕಾಲದ ಕೆಲವು ಮುಖ್ಯ ಘಟನೆಗಳು
ಸತಿ ಪದ್ದತಿಯ ನಿರ್ಮೂಲನೆ  ---- ವಿಲಿಯಂ ಬಂಟಿಕ್
ದತ್ತು ಮಕ್ಕಳಿಗೆ ಹಕ್ಕಿಲ್ಲ --------ಡಾಲ್ ಹೌಸಿ
ಭಾರತೀಯ ಶಾಸನಗಳ ಕೌನ್ಸಿಲ್ ಆಕ್ಟ್ ----ಲಾರ್ಡ್ ಕ್ಯಾನಿಂಗ್
ಇಲ್ಬಿರ್ಟ್ ಬಿಲ್----- ರಿಪ್ಪನ್
ಭಾರತೀಯ ಕೌನ್ಸಿಲ್ ಆಕ್ಟ್ ----ಲ್ಯಾನ್ಸ್ಡೌನ್
ಮಾರ್ಲೆ-ಮಿಂಟೋ ಸುಧಾರಣೆ------ ಮಿಂಟೋ
ರೌಲತ್ ಕಾಯ್ದೆ -------ಚೆಲ್ಮ್ಸ್ ಫೋರ್ಡ್
ಸೈಮನ್ ಕಮಿಷನ್ ------ಇರ್ವಿನ್
ಗಾಂಧಿ - ಇರ್ವಿನ್ ಮಾತುಕತೆ ------ಇರ್ವಿನ್
ಕಮ್ಯುನಲ್ ಅವಾರ್ಡ್------ ವಿಲ್ಲಿಂಗ್ಟನ್
ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ -----ವಿಲ್ಲಿಂಗ್ಟನ್
ಕ್ರಿಪ್ಸ್ ಕಾಯ್ದೆ------ ಲಿಂಗ್ನಿತ್ಗೋ
INA ವಿಚಾರಣೆ------- ವೇವೆಲ್
ವೇವೆಲ್ ಯೋಜನೆ ------ವೇವೆಲ್
ಕ್ಯಾಬಿನೆಟ್ ಮಿಷನ್ ಪ್ಲಾನ್------- ವೇವೆಲ್
ಭಾರತೀಯ ಸ್ವಾತಂತ್ರಕಾಯ್ದೆ----- ಮೌಂಟ್ ಬ್ಯಾಟನ್
ಎರಡನೇ ದುಂಡುಮೇಜಿನ ಸಭೆ --------ವಿಲ್ಲಿಂಗ್ಟನ್
ರೆಗ್ಯುಲೇಟಿಂಗ್ ಕಾಯ್ದೆ - 1773 -------ವಾರೆನ್ ಹೇಸ್ಟಿಂಗ್ಸ್ ( ಭಾರತದ ಮೊದಲ ಗೌರ್ನರ್ ಜನರಲ್)
ಜಮೀನ್ದಾರಿ ಕಾಯ್ದೆ --------ಕಾರ್ನ್ ವಾಲಿಸ್
ಸಹಾಯಕ ಸೈನ್ಯ ಪದ್ದತಿ----------- ವೆಲ್ಲೆಸ್ಲಿ

Impartant Days

ಜನವರಿ  
        12   ರಾಷ್ಟ್ರೀಯ ಯುವ ದಿನ  
15    ರಾಷ್ಟ್ರೀಯ ಭೂಸೇನಾ ದಿನ      
26     ಗಣರಾಜ್ಯೋತ್ಸವ        
27     ಅಂತರ ರಾಷ್ಟ್ರೀಯ ಹೋಲೋಕಾಸ್ಟ್ ಸಂಸರಣಾ ದಿನ        
30     ಹುತಾತ್ಮರ ದಿನ
ಫೆಬ್ರವರಿ
        14     ಪ್ರೇಮಿಗಳ ದಿನ
20     ಅಂತರ ರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನ      
21     ಅಂತರ ರಾಷ್ಟ್ರೀಯ ಮಾತೃಭಾಷಾದಿನ    
28     ರಾಷ್ಟ್ರೀಯ ವಿಜ್ಞಾನ ದಿನ
ಮಾರ್ಚ್        
8      ಅಂತರ ರಾಷ್ಟ್ರೀಯ ಮಹಿಳಾ ದಿನ
15 ವಿಶ್ವ ಅಂಗವಿಕಲ ದಿನ  
21    ವಿಶ್ವ ಕಾನನ ದಿನ
21    ಅಂತರ ರಾಷ್ಟ್ರೀಯ ಜನಾಂಗೀಯ ತಾರತಮ್ಯ ನಿವಾರಣ ದಿನ
22    ವಿಶ್ವ ಜಲ ದಿನ  
23 ವಿಶ್ವ ವಾತಾವರಣ ದಿನ  
ಏಪ್ರಿಲ್
5      ರಾಷ್ಟ್ರೀಯ ಸಾಗರ ದಿನ
7      ವಿಶ್ವ ಆರೋಗ್ಯದಿನ      
18     ವಿಶ್ವ ಪಾರಂಪರಿಕ ದಿನ  
22     ಭೂದಿನ
23     ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ      
ಮೇ  
1      ಕಾರ್ಮಿಕರ ದಿನ
3      ಮುದ್ರಣ ಸ್ವಾತಂತ್ರ ದಿನ
2ನೇಭಾನುವಾರ ವಿಶ್ವ ತಾಯಂದಿರ ದಿನ  
8      ರೆಡ್ ಕ್ರಾಸ್ ದಿನ
11     ರಾಷ್ಟ್ರೀಯ ತಂತ್ರಜ್ಞಾನ ದಿನ      
15     ಅಂತರ ರಾಷ್ಟ್ರೀಯ ಕೌಟುಂಬಿಕ ದಿನ      
17     ವಿಶ್ವ ದೂರಸಂಪರ್ಕ ದಿನ
22     ಅಂತರ ರಾಷ್ಟ್ರೀಯ ಜೀವ ವೈವಿಧ್ಯ ದಿನ    
24     ಕಾಮನ್ ವೆಲ್ತ್ ದಿನ      
29     ವಿಶ್ವಸಂಸ್ಥೆಯ ಶಾಂತಿಪಾಲಕರ ದಿನ      
31     ವಿಶ್ವ ತಂಬಾಕು ವಿರೋಧಿ ದಿನ    
ಜೂನ್
5       ವಿಶ್ವ ಪರಿಸರ ದಿನ      
2ನಭಾನುವಾರ ಅಪ್ಪಂದಿರ ದಿನ
20     ವಿಶ್ವ ಸೈನಿಕರ ದಿನ      
26     ಅಂತರ ರಾಷ್ಟ್ರೀಯ ಮಾದಕ ವಿರೋಧಿ ಮತ್ತು ಅಕ್ರಮ ಸಂಬಂಧ ವಿರೋಧಿ ದಿನ
ಜುಲೈ
11     ವಿಶ್ವ ಜನಸಂಖ್ಯಾದಿನ    
1ನೇ ಶನಿವಾರ   ವಿಶ್ವ ಸಹಕಾರ ದಿನ      
ಆಗಸ್ಟ್
3 ಅಂತರ ರಾಷ್ಟ್ರೀಯ ಗೆಳೆತನದ ದಿನ
6      ಹಿರೋಷಿಮ ದಿನ
9      ಕ್ವಿಟ್ ಇಂಡಿಯಾ ಮತ್ತು ನಾಗಸಾಕಿ ದಿನ  
12    ಅಂತರ ರಾಷ್ಟ್ರೀಯ ಯುವ ದಿನ  
15    ಸ್ವಾತಂತ್ರ ದಿನ
29 ರಾಷ್ಟ್ರೀಯ ಕ್ರೀಡಾದಿನ  
23    ಅಂತರ ರಾಷ್ಟ್ರೀಯ ಗುಲಾಮ ನಿರ್ಮೂಲನ ನೆನಪಿನ ದಿನ    
ಸೆಪ್ಟೆಂಬರ್        
5     ರಾಷ್ಟ್ರೀಯ ಟೀಚರ್ಸ್ ದಿನ
8     ವಿಶ್ವ ಸಾಕ್ಷರತಾ ದಿನ    
15    ಅಂತರ ರಾಷ್ಟ್ರೀಯ ಗಣತಂತ್ರ ದಿನ
16    ವಿಶ್ವ ಓಜೋನ್ ದಿನ    
21     ಅಲ್ಜಮೈರ್ ದಿನ
21     ಅಂತರ ರಾಷ್ಟ್ರೀಯ ಶಾಂತಿ ದಿನ  
26    ವಿಶ್ವ ಕಿವುಡರ ದಿನ      
27     ವಿಶ್ವ ಪ್ರವಾಸೋದ್ಯಮ ದಿನ            
ಅಕ್ಟೋಬರ್        
1     ಅಂತರ ರಾಷ್ಟ್ರೀಯ ಹಿರಿಯರ ದಿನ
4     ಪ್ರಾಣಿಗಳ ಕ್ಷೇಮಾಭ್ಯುದಯ ದಿನ
4 – 10 ವಿಶ್ವ ಅಂತರಿಕ್ಷ ವಾರ    
5      ವಿಶ್ವ ಟೀಚರ್ಸ್ ದಿನ    
8      ಭಾರತೀಯ ವೈಮಾನಿಕ ಸೇನಾ ದಿನ      
9      ವಿಶ್ವ ಅಂಚೆ ದಿನ
10    ರಾಷ್ಟ್ರೀಯ ಅಂಚೆ ದಿನ  
14     ವಿಶ್ವ ಗುಣಮಟ್ಟಗಳ ದಿನ
15     ವಿಶ್ವ ಆಹಾರ ದಿನ        
24     ವಿಶ್ವಸಂಸ್ಥೆ ದಿನ
30     ವಿಶ್ವ ಉಳಿತಾಯ ದಿನ  
ನವೆಂಬರ್        
         14    ರಾಷ್ಟ್ರೀಯ ಮಕ್ಕಳ ದಿನ,  ಮತ್ತು ಅಂತರ ರಾಷ್ಟ್ರೀಯ ಮಧುಮೇಹಿಗಳದಿನ        
20     ವಿಶ್ವ ಮಕ್ಕಳ ದಿನ        
25     ಅಂತರ ರಾಷ್ಟ್ರೀಯ ಮಹಿಳೆಯರ ವಿರುದ್ಧದ ದೌರ್ಜನ್ಯ ನಿವಾರಣ ದಿನ
ಡಿಸೆಂಬರ್        
1     ವಿಶ್ವ ಏಡ್ಸ್ ದಿನ
2     ಅಂತರ ರಾಷ್ಟ್ರೀಯ ಗುಲಾಮ ನಿರ್ಮೂಲನ ದಿನ    
4     ರಾಷ್ಟ್ರೀಯ ನೌಕಾದಳ ದಿನ        
5 ಅಂತರ ರಾಷ್ಟ್ರೀಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯ ದಿನ    
7      ರಾಷ್ಟ್ರೀಯ ಭೂಸೇನಾ ದಿನ      
7     ಅಂತರ ರಾಷ್ಟ್ರೀಯ ನಾಗರೀಕ ವಿಮಾನಯಾನ ದಿನ
9     ಅಂತರ ರಾಷ್ಟ್ರೀಯ ಲಂಚ ವಿರುದ್ಧದ ದಿನ  
10    ಮಾನವ ಹಕ್ಕುಗಳ ದಿನ
18    ಅಂತರ ರಾಷ್ಟ್ರೀಯ ವಲಸಿಗರ ದಿನ
23    ರಾಷ್ಟ್ರೀಯ ರೈತ ದಿನ
                           ***********

Saturday 5 July 2014

ಕ್ರ.ಸಂ.ಪ್ರಶಸ್ತಿವಿವರಣೆ
1ಪರಮ ವೀರ ಚಕ್ರಭಾರತ ದೇಶದ ಸೇನಾ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಇದು. ಇದು ಭಾರತ ಸರಕಾರ ನೀಡುವ ಎರಡನೇ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಸದರಿ ಧ್ಯೇಯದೊಂದಿಗೆ ನೀಡಲಾಗುತ್ತದೆ - "... most conspicuous bravery or some daring or pre-eminent act of valour or self sacrifice, in the presence of the enemy, whether on land, at sea, or in the air." ಬ್ರಿಟಿಷ್ ಸೈನ್ಯದಲ್ಲಿ ನೀಡುವ Victoria Cross, ಅಮೆರಿಕಾ ಸೈನ್ಯದಲ್ಲಿ ನೀಡುವ Medal of Honor, ಫ್ರಾನ್ಸ್ ದೇಶದಲ್ಲಿ ನೀಡುವ Legion of Honor, ರಷಿಯಾದಲ್ಲಿ ನೀಡುವ Cross of St.George ಥರ ಭಾರತ ಸೇನೆಯಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಆಗಸ್ಟ್ 15 1947 ರಿಂದ ಜಾರಿಗೆ ಬರುವಂತೆ 26 ಜನವರಿ 1950ರಂದು ಸೃಜಿಸಲಾಯಿತು. ಸಾವಿತ್ರಿ ಖಾನೋಲ್ಕರ್( ಮೂಲ ಹೆಸರು - Eva Yuonne Linda Maday-de-Maros {Hungarian ತಂದೆ ಮತ್ತು Russian ತಾಯಿ} ) ಎಂಬ ಭಾರತೀಯ ಸೇನಾಧಿಕಾರಿಯೊಬ್ಬರ ಪತ್ನಿ, ಈ ಪ್ರಶಸ್ತಿಯ ರೂಪುರೇಶೆ ತಯಾರಿಸಿದರು. ಆಕಸ್ಮಿಕವೆಂಬಂತೆ ಅವರ ಅಳಿಯ ಮೇಜರ್ ಸೋಮನಾಥ ಶರ್ಮಾ, ಈ ಪ್ರಶಸ್ತಿಯನ್ನ ಪಡೆದ ಮೊದಲಿಗರಾದರು. ಕಂಚಿನಿಂದ ತಯಾರಿಸಲಾಗುವ ಈ ಪದಕದ ಮಧ್ಯಭಾಗದಲ್ಲಿ ರಾಷ್ಟ್ರ ಲಾಂಛನವನ್ನ ಉಬ್ಬಾದ ವೃತ್ತದ ಮೇಲೆ ಮೂಡಿಸಲಾಗಿದೆ. ಇದನ್ನ ಸುತ್ತುವರೆದಂತೆ ಇಂದ್ರ ವಜ್ರಾಯುಧದ ನಾಲ್ಕು Replica ಗಳಿವೆ. ಪದಕದ ಇನ್ನೊಂದು ಬದಿಯಲ್ಲಿ ಕಮಲ ಪುಷ್ಪದಿಂದ ಪ್ರತ್ಯೇಕಗೊಂಡಂತೆ ' ಪರಮವೀರ ಚಕ್ರ ' ಎಂಬುದನ್ನ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಕೆತ್ತಲಾಗಿದೆ. ಋಷಿ ದಧೀಚಿ ದೇವತೆಗಳಿಗೆ ತನ್ನ ದೇಹದ ಮೂಳೆಯನ್ನು ವಜ್ರಾಯುಧ ಸೃಷ್ಟಿಗೆ ನೀಡಿದ ಐತಿಹ್ಯವೇ ಈ ಪದಕ ಪ್ರದಾನದ ಹಿಂದಿರುವ ತತ್ವ.
2ಇತರೆ ಸೇನಾ ಪದಕಗಳುii. ಮಹಾವೀರ ಚಕ್ರ - ಇದು ಎರಡನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಬಿಳಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ. iii. ವೀರ ಚಕ್ರ - ಇದು ಮೂರನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ಕೊರೆಯಲಾದ ಚಕ್ರದ ಮೇಲೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಕಡು ನೀಲಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ.
3ಭಾರತ ರತ್ನಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಕಲೆ, ಸಾಹಿತ್ಯ ಮತ್ತು ವೈಜ್ಞಾನಿಕ ಕ್ಷೇತ್ರಗಳ ಜೊತೆಗೆ ಸಾರ್ವಜನಿಕ ರಂಗದಲ್ಲಿ ಗುರುತಿಸಬಹುದಾದ ಸಾಧನೆಗಳಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ. 2ನೇ ಜನವರಿ 1954 ರಂದು ಸ್ಥಾಪಿತವಾದ ಈ ಪ್ರಶಸ್ತಿ 13ನೇ ಜುಲೈ 1977 ರಿಂದ 26ನೇ ಜನವರಿ 1980 ರವರೆಗೆ ಯಾರನ್ನೂ ಅಲಂಕರಿಸಲಿಲ್ಲ. ಅರಳಿ ಮರದ ಎಲೆಯಾಕರದ ಈ ಪದಕದ ಒಂದು ಬದಿ ಸೂರ್ಯನ ಚಿತ್ರದ ಕೆಳಗೆ ಭಾರತ ರತ್ನ ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಇನ್ನೊಂದು ಬದಿಯಲ್ಲಿ ರಾಷ್ಟ್ರ ಲಾಂಛನ ಮತ್ತು ಧ್ಯೇಯ ವಾಕ್ಯ ಕೆತ್ತಲಾಗಿದೆ. ಬಿಳಿ ಬಣ್ಣದ Ribbon ಈ ಪದಕವನ್ನ ಹಿಡಿದಿಡುತ್ತದೆ. ಪ್ರಶಸ್ತಿ ಆರಂಭಿಸುವಾಗ ನಿಯಮಗಳಲ್ಲಿ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಅವಕಾಶವಿರಲಿಲ್ಲ. ಈ ಕಾರಣಕ್ಕಾಗಿಯೇ ಮಹಾತ್ಮಾ ಗಾಂಧೀಜಿ ಈ ಪ್ರಶಸ್ತಿಗೆ ಭಾಜನರಾಗಲಿಲ್ಲ. 1992 ರಲ್ಲಿ ನೇತಾಜಿ ಸುಭಾಷ ಚಂದ್ರರಿಗೆ ನೀಡಿದ ಈ ಪ್ರಶಸ್ತಿಯನ್ನ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಕಾನೂನಿನ ತೊಡಕುಗಳ ಕಾರಣ ಹಿಂಪಡೆಯಲಾಯಿತು. ಸುಭಾಷ ಚಂದ್ರರು ನಿಧನರಾಗಿರುವ ಖಚಿತ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲದಿರುವುದು ಪ್ರಶಸ್ತಿ ಹಿಂಪಡೆಯಲು ಕಾರಣವಾಯಿತು.
4ಪದ್ಮ ವಿಭೂಷಣಭಾರತ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
5ಪದ್ಮಭೂಷಣಭಾರತ ಸರ್ಕಾರ ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
6ಪದ್ಮಶ್ರೀಭಾರತ ಸರ್ಕಾರ ನೀಡುವ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.
7ದಾದಾ ಸಾಹೇಬ ಫಾಲ್ಕೆ1969 ರಲ್ಲಿ ಭಾರತ ಸರ್ಕಾರ ಈ ಪ್ರಶಸ್ತಿಯನ್ನ ಸ್ಥಾಪಿಸಿ ಸಿನೆಮಾ ಜಗತ್ತಿನಲ್ಲಿ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿಯನ್ನ ನೀಡುತ್ತ ಬಂದಿದೆ. ಆ ವರ್ಷ ದಾದಾ ಸಾಹೇಬ್ ಫಾಲ್ಕೆ ಯವರ ಜನ್ಮ ಶತಮಾನೋತ್ಸವ.
8ರಾಜೀವ್ ಗಾಂಧಿ ಖೇಲ್ ರತ್ನಕ್ರೀಡಾ ಕ್ಷೇತ್ರದಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ. 1991-92 ರಲ್ಲಿ ಈ ಪ್ರಶಸ್ತಿಯನ್ನ ಆರಂಭಿಸಲಾಯಿತು. ತಂಡ ಅಥವಾ ವ್ಯಕ್ತಿ ಇಬ್ಬರಿಗೂ ನೀಡಬಹುದಾದ ಪ್ರಶಸ್ತಿ ಇದು. ಪ್ರತಿ ವರ್ಷ 1ನೇ ಏಪ್ರಿಲ್ ನಿಂದ ಮುಂದಿನ ವರ್ಷದ 31 ಮಾರ್ಚ್ ವರೆಗಿನ ಸಾಧನೆಯನ್ನ ಪರಿಗಣಿಸಲಾಗುತ್ತದೆ. ಯಾವುದೇ ರಾಜ್ಯ ಸರ್ಕಾರ, ಲೋಕಸಭಾ ಸದಸ್ಯ, SAI ಅಥವಾ ಆಯಾ ಕ್ರೀಡೆಯ ರಾಷ್ಟ್ರೀಯ ಪ್ರಾಧಿಕಾರಗಳು ನಾಮನಿರ್ದೇಶವನ್ನ ಕೇಂದ್ರ ಸರ್ಕಾರದ ಯುವಜನಸೇವಾ ಇಲಾಖೆಗೆ ಸಲ್ಲಿಸಬೇಕು. ಈ ಪ್ರಶಸ್ತಿಯು ಪದಕ, ರೂ. 7,50,000/- ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.
9ಅರ್ಜುನ ಪ್ರಶಸ್ತಿ1961 ರಲ್ಲಿ ಕೇಂದ್ರ ಸರ್ಕಾರ ಇದನ್ನ ಸ್ಥಾಪಿಸಿತು. ಕಳೆದ ಮೂರು ವರ್ಷಗಳಲ್ಲಿ ಗಣನೀಯ ಹಾಗೂ ನಿಯಮಿತ ಸಾಧನೆ ಮಾಡಿ, ಪ್ರಶಸ್ತಿಗೆ ಭಾಜನರಾದ ವರ್ಷಕ್ಕೆ ಅತ್ಯುತ್ತಮ ಅನ್ನಬಹುದಾದ ಸಾಧನೆ ಮಾಡಿದ್ದಲ್ಲಿ ಮಾತ್ರ ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ರೂ.5,00,000/- ನಗದು , ಅರ್ಜುನನ ಕಂಚಿನ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನ ಇದು ಒಳಗೊಂಡಿದೆ.
10ದ್ರೋಣಾಚಾರ್ಯ ಪ್ರಶಸ್ತಿ1985 ರಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿಯನ್ನ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾ ತರಬೇತುದಾರರಿಗೆ ನೀಡಲಾಗುತ್ತದೆ. ದ್ರೋಣಾಚಾರ್ಯರ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು ರೂ.3,00,000/- ನಗದನ್ನು ಈ ಪ್ರಶಸ್ತಿ ಒಳಗೊಂಡಿದೆ.
11ಧ್ಯಾನಚಂದ್ ಪ್ರಶಸ್ತಿಕ್ರೀಡಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ನೀಡುವ ಅತ್ಯುನ್ನತ ಪ್ರಶಸ್ತಿ ಇದು. 2002ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿ ಒಂದು ಪ್ರಶಸ್ತಿ ಫಲಕ , ರೂ.1,50,000/- ನಗದು ಮತ್ತು ಪ್ರಶಸ್ತಿ ಪತ್ರವನ್ನ ಒಳಗೊಂಡಿದೆ.

ಕ್ರ.ಸಂ. ಪ್ರಶಸ್ತಿ ವಿವರಣೆ

1 ಪರಮ ವೀರ ಚಕ್ರ ಭಾರತ ದೇಶದ ಸೇನಾ ಸೇವೆಗೆ ನೀಡುವ ಅತ್ಯುನ್ನತ ಪ್ರಶಸ್ತಿ ಇದು. ಇದು ಭಾರತ ಸರಕಾರ ನೀಡುವ ಎರಡನೇ ಅತ್ಯುನ್ನತ ಪ್ರಶಸ್ತಿ. ಈ ಪ್ರಶಸ್ತಿಯನ್ನು ಸದರಿ ಧ್ಯೇಯದೊಂದಿಗೆ ನೀಡಲಾಗುತ್ತದೆ - "... most conspicuous bravery or some daring or pre-eminent act of valour or self sacrifice, in the presence of the enemy, whether on land, at sea, or in the air." ಬ್ರಿಟಿಷ್ ಸೈನ್ಯದಲ್ಲಿ ನೀಡುವ Victoria Cross, ಅಮೆರಿಕಾ ಸೈನ್ಯದಲ್ಲಿ ನೀಡುವ Medal of Honor, ಫ್ರಾನ್ಸ್ ದೇಶದಲ್ಲಿ ನೀಡುವ Legion of Honor, ರಷಿಯಾದಲ್ಲಿ ನೀಡುವ Cross of St.George ಥರ ಭಾರತ ಸೇನೆಯಲ್ಲಿ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಆಗಸ್ಟ್ 15 1947 ರಿಂದ ಜಾರಿಗೆ ಬರುವಂತೆ 26 ಜನವರಿ 1950ರಂದು ಸೃಜಿಸಲಾಯಿತು. ಸಾವಿತ್ರಿ ಖಾನೋಲ್ಕರ್( ಮೂಲ ಹೆಸರು - Eva Yuonne Linda Maday-de-Maros {Hungarian ತಂದೆ ಮತ್ತು Russian ತಾಯಿ} ) ಎಂಬ ಭಾರತೀಯ ಸೇನಾಧಿಕಾರಿಯೊಬ್ಬರ ಪತ್ನಿ, ಈ ಪ್ರಶಸ್ತಿಯ ರೂಪುರೇಶೆ ತಯಾರಿಸಿದರು. ಆಕಸ್ಮಿಕವೆಂಬಂತೆ ಅವರ ಅಳಿಯ ಮೇಜರ್ ಸೋಮನಾಥ ಶರ್ಮಾ, ಈ ಪ್ರಶಸ್ತಿಯನ್ನ ಪಡೆದ ಮೊದಲಿಗರಾದರು. ಕಂಚಿನಿಂದ ತಯಾರಿಸಲಾಗುವ ಈ ಪದಕದ ಮಧ್ಯಭಾಗದಲ್ಲಿ ರಾಷ್ಟ್ರ ಲಾಂಛನವನ್ನ ಉಬ್ಬಾದ ವೃತ್ತದ ಮೇಲೆ ಮೂಡಿಸಲಾಗಿದೆ. ಇದನ್ನ ಸುತ್ತುವರೆದಂತೆ ಇಂದ್ರ ವಜ್ರಾಯುಧದ ನಾಲ್ಕು Replica ಗಳಿವೆ. ಪದಕದ ಇನ್ನೊಂದು ಬದಿಯಲ್ಲಿ ಕಮಲ ಪುಷ್ಪದಿಂದ ಪ್ರತ್ಯೇಕಗೊಂಡಂತೆ ' ಪರಮವೀರ ಚಕ್ರ ' ಎಂಬುದನ್ನ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಕೆತ್ತಲಾಗಿದೆ. ಋಷಿ ದಧೀಚಿ ದೇವತೆಗಳಿಗೆ ತನ್ನ ದೇಹದ ಮೂಳೆಯನ್ನು ವಜ್ರಾಯುಧ ಸೃಷ್ಟಿಗೆ ನೀಡಿದ ಐತಿಹ್ಯವೇ ಈ ಪದಕ ಪ್ರದಾನದ ಹಿಂದಿರುವ ತತ್ವ.

2 ಇತರೆ ಸೇನಾ ಪದಕಗಳು ii. ಮಹಾವೀರ ಚಕ್ರ - ಇದು ಎರಡನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಬಿಳಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ. iii. ವೀರ ಚಕ್ರ - ಇದು ಮೂರನೆಯ ಅತ್ಯುನ್ನತ ಸೇನಾ ಪದಕ. ಬೆಳ್ಳಿಯಿಂದ ತಯಾರಿಸಲಾಗುವ ಈ ಪದಕದ ಮುಖದ ಮೇಲೆ ನಕ್ಷತ್ರದ ಒಳಗೆ ಕೊರೆಯಲಾದ ಚಕ್ರದ ಮೇಲೆ ರಾಷ್ಟ್ರ ಲಾಂಛನ ವನ್ನ ಕೆತ್ತಲಾಗಿದೆ. ಈ ಪದಕವು ಅರ್ಧ ಕೇಸರಿ ಮತ್ತು ಅರ್ಧ ಕಡು ನೀಲಿ ಬಣ್ಣದ Ribbon ನ್ನು ಒಳಗೊಂಡಿರುತ್ತದೆ.

3 ಭಾರತ ರತ್ನ ಇದು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ. ಕಲೆ, ಸಾಹಿತ್ಯ ಮತ್ತು ವೈಜ್ಞಾನಿಕ ಕ್ಷೇತ್ರಗಳ ಜೊತೆಗೆ ಸಾರ್ವಜನಿಕ ರಂಗದಲ್ಲಿ ಗುರುತಿಸಬಹುದಾದ ಸಾಧನೆಗಳಿಗೆ ಈ ಪ್ರಶಸ್ತಿಯನ್ನ ನೀಡಲಾಗುತ್ತದೆ. 2ನೇ ಜನವರಿ 1954 ರಂದು ಸ್ಥಾಪಿತವಾದ ಈ ಪ್ರಶಸ್ತಿ 13ನೇ ಜುಲೈ 1977 ರಿಂದ 26ನೇ ಜನವರಿ 1980 ರವರೆಗೆ ಯಾರನ್ನೂ ಅಲಂಕರಿಸಲಿಲ್ಲ. ಅರಳಿ ಮರದ ಎಲೆಯಾಕರದ ಈ ಪದಕದ ಒಂದು ಬದಿ ಸೂರ್ಯನ ಚಿತ್ರದ ಕೆಳಗೆ ಭಾರತ ರತ್ನ ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಇನ್ನೊಂದು ಬದಿಯಲ್ಲಿ ರಾಷ್ಟ್ರ ಲಾಂಛನ ಮತ್ತು ಧ್ಯೇಯ ವಾಕ್ಯ ಕೆತ್ತಲಾಗಿದೆ. ಬಿಳಿ ಬಣ್ಣದ Ribbon ಈ ಪದಕವನ್ನ ಹಿಡಿದಿಡುತ್ತದೆ. ಪ್ರಶಸ್ತಿ ಆರಂಭಿಸುವಾಗ ನಿಯಮಗಳಲ್ಲಿ ಮರಣೋತ್ತರವಾಗಿ ಪ್ರಶಸ್ತಿ ನೀಡಲು ಅವಕಾಶವಿರಲಿಲ್ಲ. ಈ ಕಾರಣಕ್ಕಾಗಿಯೇ ಮಹಾತ್ಮಾ ಗಾಂಧೀಜಿ ಈ ಪ್ರಶಸ್ತಿಗೆ ಭಾಜನರಾಗಲಿಲ್ಲ. 1992 ರಲ್ಲಿ ನೇತಾಜಿ ಸುಭಾಷ ಚಂದ್ರರಿಗೆ ನೀಡಿದ ಈ ಪ್ರಶಸ್ತಿಯನ್ನ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಕಾನೂನಿನ ತೊಡಕುಗಳ ಕಾರಣ ಹಿಂಪಡೆಯಲಾಯಿತು. ಸುಭಾಷ ಚಂದ್ರರು ನಿಧನರಾಗಿರುವ ಖಚಿತ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲದಿರುವುದು ಪ್ರಶಸ್ತಿ ಹಿಂಪಡೆಯಲು ಕಾರಣವಾಯಿತು.

4 ಪದ್ಮ ವಿಭೂಷಣ ಭಾರತ ಸರ್ಕಾರ ನೀಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.

5 ಪದ್ಮಭೂಷಣ ಭಾರತ ಸರ್ಕಾರ ನೀಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.

6 ಪದ್ಮಶ್ರೀ ಭಾರತ ಸರ್ಕಾರ ನೀಡುವ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ.

7 ದಾದಾ ಸಾಹೇಬ ಫಾಲ್ಕೆ 1969 ರಲ್ಲಿ ಭಾರತ ಸರ್ಕಾರ ಈ ಪ್ರಶಸ್ತಿಯನ್ನ ಸ್ಥಾಪಿಸಿ ಸಿನೆಮಾ ಜಗತ್ತಿನಲ್ಲಿ ಸಾಧನೆಗೈದ ಮಹನೀಯರಿಗೆ ಈ ಪ್ರಶಸ್ತಿಯನ್ನ ನೀಡುತ್ತ ಬಂದಿದೆ. ಆ ವರ್ಷ ದಾದಾ ಸಾಹೇಬ್ ಫಾಲ್ಕೆ ಯವರ ಜನ್ಮ ಶತಮಾನೋತ್ಸವ.

8 ರಾಜೀವ್ ಗಾಂಧಿ ಖೇಲ್ ರತ್ನ ಕ್ರೀಡಾ ಕ್ಷೇತ್ರದಲ್ಲಿ ಭಾರತ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿ. 1991-92 ರಲ್ಲಿ ಈ ಪ್ರಶಸ್ತಿಯನ್ನ ಆರಂಭಿಸಲಾಯಿತು. ತಂಡ ಅಥವಾ ವ್ಯಕ್ತಿ ಇಬ್ಬರಿಗೂ ನೀಡಬಹುದಾದ ಪ್ರಶಸ್ತಿ ಇದು. ಪ್ರತಿ ವರ್ಷ 1ನೇ ಏಪ್ರಿಲ್ ನಿಂದ ಮುಂದಿನ ವರ್ಷದ 31 ಮಾರ್ಚ್ ವರೆಗಿನ ಸಾಧನೆಯನ್ನ ಪರಿಗಣಿಸಲಾಗುತ್ತದೆ. ಯಾವುದೇ ರಾಜ್ಯ ಸರ್ಕಾರ, ಲೋಕಸಭಾ ಸದಸ್ಯ, SAI ಅಥವಾ ಆಯಾ ಕ್ರೀಡೆಯ ರಾಷ್ಟ್ರೀಯ ಪ್ರಾಧಿಕಾರಗಳು ನಾಮನಿರ್ದೇಶವನ್ನ ಕೇಂದ್ರ ಸರ್ಕಾರದ ಯುವಜನಸೇವಾ ಇಲಾಖೆಗೆ ಸಲ್ಲಿಸಬೇಕು. ಈ ಪ್ರಶಸ್ತಿಯು ಪದಕ, ರೂ. 7,50,000/- ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.

9 ಅರ್ಜುನ ಪ್ರಶಸ್ತಿ 1961 ರಲ್ಲಿ ಕೇಂದ್ರ ಸರ್ಕಾರ ಇದನ್ನ ಸ್ಥಾಪಿಸಿತು. ಕಳೆದ ಮೂರು ವರ್ಷಗಳಲ್ಲಿ ಗಣನೀಯ ಹಾಗೂ ನಿಯಮಿತ ಸಾಧನೆ ಮಾಡಿ, ಪ್ರಶಸ್ತಿಗೆ ಭಾಜನರಾದ ವರ್ಷಕ್ಕೆ ಅತ್ಯುತ್ತಮ ಅನ್ನಬಹುದಾದ ಸಾಧನೆ ಮಾಡಿದ್ದಲ್ಲಿ ಮಾತ್ರ ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ರೂ.5,00,000/- ನಗದು , ಅರ್ಜುನನ ಕಂಚಿನ ಪ್ರತಿಮೆ ಮತ್ತು ಪ್ರಶಸ್ತಿ ಪತ್ರವನ್ನ ಇದು ಒಳಗೊಂಡಿದೆ.

10 ದ್ರೋಣಾಚಾರ್ಯ ಪ್ರಶಸ್ತಿ 1985 ರಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿಯನ್ನ ಅತ್ಯುತ್ತಮ ಸಾಧನೆ ತೋರಿದ ಕ್ರೀಡಾ ತರಬೇತುದಾರರಿಗೆ ನೀಡಲಾಗುತ್ತದೆ. ದ್ರೋಣಾಚಾರ್ಯರ ಕಂಚಿನ ಪ್ರತಿಮೆ, ಪ್ರಶಸ್ತಿ ಪತ್ರ ಮತ್ತು ರೂ.3,00,000/- ನಗದನ್ನು ಈ ಪ್ರಶಸ್ತಿ ಒಳಗೊಂಡಿದೆ.

11 ಧ್ಯಾನಚಂದ್ ಪ್ರಶಸ್ತಿ ಕ್ರೀಡಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ನೀಡುವ ಅತ್ಯುನ್ನತ ಪ್ರಶಸ್ತಿ ಇದು. 2002ರಲ್ಲಿ ಸ್ಥಾಪಿತವಾದ ಈ ಪ್ರಶಸ್ತಿ ಒಂದು ಪ್ರಶಸ್ತಿ ಫಲಕ , ರೂ.1,50,000/- ನಗದು ಮತ್ತು ಪ್ರಶಸ್ತಿ ಪತ್ರವನ್ನ ಒಳಗೊಂಡಿದೆ.
ಕ್ರ.
ಸಂ.
ರಾಜ್ಯ
ರಾಜಧಾನಿ
1.
ಆಂಧ್ರ ಪ್ರದೇಶ

ಹೈದರಾಬಾದ್
2.
ಅರುಣಾಚಲ ಪ್ರದೇಶ
ಇಟಾ ನಗರ್
3.
ಅಸೋಮ್
ದಿಸ್ ಪುರ್
4.
ಬಿಹಾರ್
ಪಾಟ್ನಾ
5.
ಛತ್ತೀಸ್ ಘರ್
ರಾಯ್ ಪುರ್
6.
ಗೋವಾ
ಪಣಜಿ
7.
ಗುಜರಾತ್
ಗಾಂಧಿನಗರ
8.
ಹರ್ಯಾಣಾ
ಚಂಢೀಗರ್
9.
ಹಿಮಾಚಲ ಪ್ರದೇಶ
ಶಿಮ್ಲಾ
10.
ಜಮ್ಮು & ಕಾಶ್ಮೀರ
ಶ್ರೀನಗರ / ಜಮ್ಮು*
11.
ಜಾರ್ಖಂಡ್
ರಾಂಚಿ
12.
ಕರ್ನಾಟಕ
ಬೆಂಗಳೂರು
13.
ಕೇರಳ
ತಿರುವನಂತಪುರಂ
14.
ಮಧ್ಯಪ್ರದೇಶ
ಭೋಪಾಲ್
15.
ಮಹಾರಾಷ್ಟ್ರ
ಮುಂಬೈ
16.
ಮಣಿಪುರ
ಇಂಫಾಲ್
17.
ಮೇಘಾಲಯ
ಶಿಲ್ಲೋಂಗ್
18.
ಮಿಝೋರಾಮ್
ಐಝವಾಲ್
19.
ನಾಗಾಲ್ಯಾಂಡ್
ಕೋಹಿಮಾ
20
ಒಡಿಶಾ
ಭುವನೇಶ್ವರ್
21
ಪಂಜಾಬ್
ಚಂಢೀಗರ್
22
ರಾಜಸ್ಥಾನ್
ಜೈಪುರ್
23
ಸಿಕ್ಕಿಮ್
ಗ್ಯಾಂಗ್ ಟಕ್
24
ತಮಿಳುನಾಡು
ಚೆನ್ನೈ
25
ತ್ರಿಪುರಾ
ಅಗರ್ತಲಾ
26
ಉತ್ತರ ಪ್ರದೇಶ
ಲಕ್ನೋ
27
ಉತ್ತರಾಖಂಡ್
ಡೆಹ್ರಾಡೂನ್
28
ಪಶ್ಚಿಮ ಬಂಗಾಳ
ಕೋಲ್ಕತಾ
*ಶ್ರೀನಗರ - ಬೇಸಿಗೆ ರಾಜಧಾನಿ / ಜಮ್ಮು - ಚಳಿಗಾಲದರಾಜಧಾನಿ

ಕ್ರ.
ಸಂ.
ಕೇಂದ್ರಾಡಳಿತ ಪ್ರದೇಶ
ರಾಜಧಾನಿ
1.
ಅಂಡಮಾನ್ ಮತ್ತು ನಿಕೋಬಾರ್
ಪೋರ್ಟ್ ಬ್ಲೇರ್
2.
ಚಂಡೀಗರ್
ಚಂಡೀಗರ್
3.
ದಮನ್ ಮತ್ತು ದಿಯು
ದಮನ್
4.
ದಾದ್ರಾ ಮತ್ತು ನಗರ್ ಹವೇಲಿ
ಸಿಲ್ವಾಸಾ
5.
ಲಕ್ಷದ್ವೀಪ
ಕವರತ್ತಿ
6.
ದೆಹಲಿ
ನವದೆಹಲಿ
7.
ಪುದುಚೆರಿ
ಪುದುಚೆರಿa